librarian@kud.ac.in
0836-2215212 / 247
ಪ್ರೊ. ಶಿ.ಶಿ. ಬಸವನಾಳ ಗ್ರಂಥಾಲಯ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

 

ವಿಭಿನ್ನ ಸಾಮರ್ಥ್ಯದ ಬಳಕೆದಾರರಿಗೆ

ವಿಭಿನ್ನ ಸಾಮರ್ಥ್ಯದ ಓದುಗರಿಗಾಗಿ ಅವಶ್ಯವಿರುವ ಈ ಕೆಳಗಿನ ಸಹಾಯಕ ಉಪಕರಣಗಳನ್ನು ಪೆÇ್ರ.ಶಿ.ಶಿ. ಬಸವನಾಳ ಗ್ರಂಥಾಲಯದಲ್ಲಿ ವಿಶೇಷವಾದ ಕೊಠಡಿಯಲ್ಲಿ ಒದಗಿಸಲಾಗಿದೆ.

 

 

 
  ಕ್ರ. ಸಂ.  ಸಾಧನದ ಹೆಸರು
1

SARA CE ಪಠ್ಯ ಪಠಣಕ

SARA CE.JPG

ಇದೊಂದು ಕಂಪ್ಯೂಟರ್ ಆಧಾರಿತ ಸರಳ ಯಂತ್ರವಾಗಿದ್ದು ಇದರ ಬಳಕೆಗೆ ಕಂಪ್ಯೂಟರ್ ಜ್ಞಾನದ ಅವಶ್ಯಕತೆ ಇರುವುದಿಲ್ಲ. ಯಾವುದೇ ಪಠ್ಯವನ್ನು ಇದು ಶಬ್ದವಾಗಿ ಪರಿವರ್ತಿಸಿ ಓದುತ್ತದೆ. ಮತ್ತು ಸಣ್ಣ ಅಕ್ಷರಗಳನ್ನು ಚಿತ್ರ ಪಟಗಳನ್ನು ದೊಡ್ಡದಾಗಿ ಕಂಪ್ಯೂಟರ್ ಪರದೆಯಲ್ಲಿ ತೋರಿಸುತ್ತದೆ.

2

ZoomEx ಪಠ್ಯ ಪಠಣಕ

ZoomEx.JPG

ಇದು ಕಂಪ್ಯೂಟರ್ ಆಧಾರಿತವಾಗಿದ್ದು ಸರಳ ಉಪಕರಣವಾಗಿರುತ್ತದೆ ಕ್ಯಾಮರಾ ಮತ್ತು ಸ್ಕ್ಯಾನರ್ ಅನ್ನು ಒಳಗೊಂಡಿದೆ ಮೊಷನ್ ಸೆನ್ಸರ್ ಹೊಂದಿದ್ದು ಪಠ್ಯವನ್ನು ಸ್ಪಷ್ಟವಾಗಿ ಭಾರತೀಯ ಇಂಗ್ಲೀಷ ಉಚ್ಛಾರಣೆಯಲ್ಲಿ ಓದುತ್ತದೆ.

3

Kurzweil K1000 ಸ್ಕ್ಯಾನಿಂಗ್ ಮತ್ತು ರೀಡಿಂಗ್ ತಂತ್ರಾಂಶ

ಈ ತಂತ್ರಾಂಶವು ಕಂಪ್ಯೂಟರನ್ನು ಸ್ಕ್ಯಾನಿಂಗ್ ಹಾಗೂ ಓದುವ ಯಂತ್ರವನ್ನಾಗಿಸುತ್ತದೆ. ಮಂದ ದೃಷ್ಟಿ ಇರುವವರಿಗೆ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಓದುತ್ತದೆ.

4

Plex Talk PTN2 ಮಾತನಾಡುವ ಡೈಸಿ ಪ್ಲೇಯರ್

Flex Talk.JPGಇದರ ಸಹಾಯದಿಂದ DAISY ಪುಸ್ತಕಗಳನ್ನು ಅಥವಾ ಇ-ಪುಸ್ತಕಗಳನ್ನು ಸ್ಪಷ್ಟವಾಗಿ ಓದುತ್ತದೆ. ವಿವಿಧ ಸಂಗ್ರಾಹಕಗಳಾದ CD, SD cards, USB Pendrive ಗಳಲ್ಲಿ ಇರುವ ಇ-ಪುಸ್ತಕಗಳನ್ನು ಶಬ್ದ ರೂಪದಲ್ಲಿ ಪರಿವರ್ತಿಸಿ ಓದುತ್ತದೆ.

5

JAWS ಮಾತನಾಡುವ ತಂತ್ರಾಂಶ. JAWS.JPG

 

 

 

 

 

 

 

 

   

 

JAWS ತಂತ್ರಾಂಶದಿಂದ ಯಾವುದೆ ಕಂಪ್ಯೂಟರನ್ನು ಓದುವ ಕಂಪ್ಯೂಟರನ್ನಾಗಿಸಬಹುದು. ದೃಷ್ಟಿ ರಹಿತ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದ್ದು, ಕಂಪ್ಯೂಟರ್‍ನ windows  ತಂತ್ರಾಂಶದಲ್ಲಿರುವಯಾವುದೇ ಉಪತಂತ್ರಾಂಶಗಳನ್ನು ಉಪಯೋಗಿಸಬಹುದಾಗಿದೆ.

6

Magic ಕಂಪ್ಯೂಟರ್ ಪರದೆ ವರ್ಧಕ ಮತ್ತು ಪಠಣಕ

MAGIC pro.JPG

ಈ ತಂತ್ರಾಂಶವು ಕಂಪ್ಯೂಟರ್ ಪರದೆಯನ್ನು 36 ಪಟ್ಟು ವರ್ದಿಸುತ್ತದೆ ಇದರಿಂದ ಅಲ್ಪ ದೃಷ್ಟಿ ದೋಷ ಇರುವ ವಿದ್ಯಾರ್ಥಿಗಳನ್ನು ಸ್ವತಂತ್ರವಾಗಿ ಕಂಪ್ಯೂಟರ್‍ನ್ನು ಉಪಯೋಗಿಸಲು ಸಮರ್ಥರನ್ನಾಗಿಸುತ್ತದೆ.

7

Prisma Desktop ವರ್ದಕ

Prisma.JPG

ಇದು ಕಂಪ್ಯೂಟರ್ ಪರದೆಯನ್ನು 52 ಪಟ್ಟು ವರ್ದಿಸಿ ತೋರಿಸುತ್ತದೆ. ಕ್ಯಾಮರಾ ಸಹಾಯದಿಂದ ಅವಶ್ಯವಿರುವಷ್ಟು ಸರಳವಾಗಿ ವೃದ್ಧಿಸಬಹುದಾಗಿದೆ. ಇದರಲ್ಲಿ ಮೂರು ಆಯ್ಕೆಗಳಿದ್ದು ಪೂರ್ಣ ಪ್ರಮಾಣದ ಬಣ್ಣದಲ್ಲಿ, ಕಪ್ಪು ಬಿಳುಪು ರೂಪದಲ್ಲಿ ಮತ್ತು ಬೆಳಕನ್ನು ಹೆಚ್ಚಿಸಲು ಪ್ರಕಾಶಕವನ್ನು ಹೊಂದಿದೆ. ಪ್ರಕಾಶಮಾನವನ್ನು ಹೆಚ್ಚು ಕಡಿಮೆ ಮಾಡಬಹುದಾಗಿದೆ. ಮತ್ತು ಇದರ ಸಹಾಯದಿಂದ ಸಾಮಾನ್ಯ ಟಿ.ವಿ ಪರದೆಯನ್ನು ಕೂಡ ಬಳಸಬಹುದಾಗಿದೆ.

8

Lex instant ತ್ವರಿತ ಪಠಣಕ ಮತ್ತು ಸ್ಕ್ಯಾನರ್

ಇದು ಮುದ್ರಿತ ಪುಸ್ತಕಗಳನ್ನು ವೇಗವಾಗಿ ಓದುತ್ತದೆ ಪ್ರತಿ ನಿಮಿಷಕ್ಕೆ ಸುಮಾರು 20 ಪುಟಗಳನ್ನು ಓದುತ್ತದೆ. ಪುಸ್ತಕ ಪುಟಗಳ ಸ್ಪಷ್ಟವಾದ ಚಿತ್ರವನ್ನು ಸೆರೆಹಿಡಿದು ಅದರ ಬಣ್ಣ/ಹಿನ್ನೆಲೆ ಚಿತ್ರವನ್ನು ಬದಲಾಯಿಸುತ್ತದೆ. ವಿಸ್ತೃತ ಆರು ಮಾದರಿಗಳಲ್ಲಿ ನೋಡಬಹುದಾಗಿದೆ. ಪಠ್ಯವನ್ನು ತ್ವರಿತವಾಗಿ MP3, MS Word ಅಥವಾ PDF ಕಡತವಾಗಿ ಸಂಗ್ರಹಿಸಬಹುದಾಗಿದೆ.

 

 





  0836-2215212
   librarian@kud.ac.in

University Librarian
Prof. S. S. Basavanal Library Karnatak University, Pavate Nagar Dharwad - 580003 Karnataka. India